ಪಿಸುಗುಟ್ಟು ಕೇಳುತ್ತಿದ್ದ ಸಂದೇಹಗಳನ್ನೆಲ್ಲ ನೆನೆಸಿಕೊಂಡು ಮೆಲುಕು ಹಾಕುತ್ತ ಕುಳಿತು ವರ್ಷ ಕಳೆಯುತ್ತ ಬಂತು. ಇಂದಿಗೂ ನೀನು ಬಿಟ್ಟುಹೋದ ಅಪೂರ್ಣ ಪ್ರಶ್ನಾವಳಿಗಳಿಗೆ ಉತ್ತರ ಹುಡುಕುತ್ತಲೇ ಇದ್ದೇನೆ. ಬೇಕಾದರೆ ಎದೆಗೂಡ ಮೇಲೆ ಕಿವಿ ಇಟ್ಟು ಕೇಳುವಿಯಂತೆ.. ಪ್ರಶ್ನೆಗಳು ಜೋರಾಗಿಯೇ ಡವಡವಿಸುತ್ತಿರುವ ದನಿ ಕೇಳಬಹುದು.
ನಸುಕು ಹರಿಯುವುದರ ಯಾವ ಪರಿವೆಯೂ ಇಲ್ಲದಂತೆ ಹನ್ನೊಂದರ ತನಕ ಬಿದ್ದಿರುತ್ತಿದ್ದ ನನಗೆ ಅಂದೇನಾಯಿತು ಗೊತ್ತಿಲ್ಲ.
ಹಠಾತ್ತನೇ ಕತ್ತಲು ಆರುವುದರೊಳಗೇ ಎಚ್ಚರವಾಗಿ ಸದ್ದಿಲ್ಲದೇ
ಕದ ತೆಗೆದು ಮನೆಯ ಅಂಗಳ ದಾಟಿ ಹಾದಿ ಹಿಡಿದಿದ್ದೆ.
ಯಾವತ್ತೂ ಇಲ್ಲದ ಉಮೇದಿಯಲ್ಲಿ ಓಡುತ್ತಾ ಊರ ದೇಗುಲದ ದ್ವಾರದ ಮುಂದೆ ನಿಂತು ಏದುಸಿರು ಬಿಡುತ್ತಿದ್ದೆ.
ರವಿ ಮಾಮ ಕೇಕೆ ಹಾಕುತ್ತಾ ಬೆಳಗು ಮಾಡುವ ಸದ್ದು ಭಟ್ಟರು ಅಭಿಷೇಕಕ್ಕೆ ಬಿಂದಿಗೆ ಗಡಗಡೆಯಿಂದ ಇಳಿಸುವ ಸದ್ದಿನೊಂದಿಗೆ ಕಲಸಿಹೋಗುತ್ತಿತ್ತು. ತಾಳಮೇಳಗಳಿಲ್ಲದ ದಿನಚರಿಯೊಂದಕ್ಕೆ ನಾಂದಿಯಾಗುವ ಸಂಭ್ರಮದಲ್ಲಿ ದೇಗುಲದ ಹಣತೆಯೊಂದು ಜೋರಾಗಿ ಉರಿಯುತ್ತಲಿತ್ತು.
ಗಂಟೆ ಬಾರಿಸಿ ಕರಮುಗಿದು ಪ್ರದಕ್ಷಿಣೆ ಹಾಕಿ ಒಂದೆರಡು ನಿಮಿಷ ಧ್ಯಾನಿಸುತ್ತ ಕುಳಿತೆ. ಆಗಷ್ಟೇ ಬೆಳಗುಜಾವದ ಚಿಲಿಪಿಲಿಯ ಹಾಡು ಸುರುವಾಯಿತು.. ಕೌಸಲ್ಯ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ....
ಪ್ರಶ್ನೆ ಬೆಳಗಿನಲ್ಲೇ ಹುಟ್ಟಿದೆಯೆಂದರೆ ಇಂದೇನೋ ವಿಶೇಷವೋ ಅಥವಾ ವಿಚಿತ್ರವೋ ಕಾದಿದೆಯೆನ್ನುವುದು ಪಕ್ಕಾ. ಧ್ಯಾನ ನಿರತನಾಗ ಪರ್ಯತ್ನದಲ್ಲಿದ್ದವನಿಗೆ ಮನಸ್ಸನ್ನು ಕೇಂದ್ರೀಕರಿಸಲಶಕ್ತನಾಗಿ ಸಂಶಯ,ಸಂದೇಹಗಳ ಜಡಿಮಳೆ ಸುರಿದಂತಾಗಿ ಎದ್ದು ಹೊರಬಂದೆ. ಅಂಥ ತಲೆಕೆಳಗಾಗಿಸುವ ಯೋಚನೆಗಳು ಹುಟ್ಟಿದ್ದೆಲ್ಲಿಂದ,ಪ್ರಶ್ನೆಗಳು ಮೂಡಿದ್ದೆಲ್ಲಿಂದ ಮತ್ತು ಅದಕ್ಕೊಂದಷ್ಟು ಸಿದ್ಧ ಉತ್ತರಗಳಿಗಾಗಿ ತಡಕಾಡುವ ಗೋಜು ಅಂಟಿಕೊಂಡದ್ದೆಲ್ಲಿಂದ??
ನಿಜವಾಗಿಯೂ ಆತ ಮೂರ್ತನಾಗಿರದಿದ್ದರೆ ಇಂದಿಗೆ ಇಂಥ ಪ್ರಶ್ನಾವಳಿಗಳೆಲ್ಲ ಅರ್ಥ ಕಳೆದುಕೊಂಡಿರುತ್ತಿದ್ದುವು. ಸಾದ್ಯವಾದಷ್ಟು ಅವನು ನಮ್ಮಿಂದ ಅಂತರ ಕಾಯ್ದುಕೊಳ್ಳುವುದು ಬದುಕಿನ ಅಲೆಮಾರಿ ಪ್ರಸಂಗಗಳಿಗೆ ತುಸು ರೋಚಕತೆಯನ್ನಿಡುವುದಕ್ಕೇ ಇರಬೇಕು. ಹುಡುಕಿ ಹೊರಟರೆ ದೇವರೇ ಸಿಗ್ತಾನಂತೆ ಅಂತ ಕನವರಿಸುತ್ತ ಎದ್ದು ಬಂದ ಘಳಿಗೆ ಇವೆಲ್ಲದರ ಜ್ಞಾನೋದಯವಾಗದಿದ್ದದ್ದಕ್ಕೂ ಹಲವು ಕಾರಣಗಳಿರಬಹುದು.
ತಾನಾಯಿತು ತನ್ನ ಪಾಡಾಯಿತು ಎಂದು ದಿನದೂಡುವ ಮಾಮೂಲಿ
ಕ್ರಿಯಾವಳಿಗಳಿಗಿಂತ ಇಂದು ಏನದೋ ವಿಭಿನ್ನವಾದದ್ದನ್ನು ಹುಡುಕುವ,ನಡೆಸುವ ಹೊಸ ಕ್ಷಣಗಳು ಸೂರ್ಯಪ್ರಭೆಯೊಂದಿಗೆ ಪೂರ್ವದ ತಪ್ಪಲಿನಿಂದ ನುಸುಳಿ ಬರತೊಡಗಿದ್ದವು.
ಧರ್ಮವನ್ನು,ದೇವರನ್ನು ಪ್ರಶ್ನಿಸಿ ಸವಾಲೊಡ್ಡುವ
ಕ್ರಿಯೆಯಲ್ಲಿ ಸಣ್ಣ ಅಚಾತುರ್ಯವಾದರೂ ಅದು ಮತ್ತೆ ಎದ್ದೇಳದಂತೆ ಘಾಸಿಗೊಳಿಸಿಬಿಡುತ್ತದೆ. ಹಾಗೆಂದು ಅದೇ ಪ್ರಶ್ನೆಗಳು ಏಕಾಂತದಲ್ಲಿ ಎಲ್ಲರಿಗೂ ಬಂದಿರಲೂಬಹುದು. ಆದರೆ ನಂಬಿಕೆಯ ಜೊತೆಗಿನ ಆಟದಲ್ಲಿ ಕೈ ಸುಟ್ಟುಕೊಳ್ಳುವ ಉಸಾಬರಿ ನನಗೆ ಬೇಡವೆಂದು ಬಿಟ್ಟದ್ದೇ ಹೆಚ್ಚು. ತಾಪತ್ರಯ ಯಾರಿಗಿಲ್ಲ ಹೇಳಿ.?
ಎಲ್ಲದಕ್ಕೂ ಶನೇಶ್ವರನೇ ಹೊಣೆ ಎನ್ನುತ್ತಾ ದೇವರ ಆಟ ಬಲ್ಲವರಾರು ? ಎಂದು ಹಾಡಿಕೊಳ್ಳುತ್ತಾ ಕಾಲ ಕಳೆಯುವುದಕ್ಕಿಂತ
ದೇವರನ್ನು ಹುಡುಕುತ್ತಾ,ಕಾಯುತ್ತಾ,ಅಲೆಯುತ್ತ,ಪ್ರಶ್ನಿಸುತ್ತ, ಉತ್ತರಿಸುತ್ತ ಕಾರ್ಯಾನುರಕ್ತನಾಗಿರುವುದು ಎಷ್ಟೋ ಮಿಗಿಲೆಂದೆನಿಸಿತು. ಅಂದು ಆದದ್ದೂ ಅದೇ ಇರಬಹುದು.
ಗುಡಿಯೊಳಗೆ ದೇವರಿದ್ದಾನೋ ಇಲ್ಲವೋ.. ದೇವರ ಸೃಷ್ಟಿ ಈ ಜಗತ್ತೆಂದು ಹೇಳುತ್ತಲೇ ಮನುಷ್ಯ ದೇವರನ್ನು ಸೃಷ್ಟಿಸಿದನೋ ಅಥವಾ ಬರೀ ಕಲ್ಪನೆಗಳ ಆಚರಣೆಗಳೊಂದಿಗೆ ನಂಬಿಕೆಗಳು ಸೃಷ್ಟಿಯಾದುವೋ..?
ಹೀಗೇ ಜಟಿಲ ಪ್ರಶ್ನಾವಳಿಗಳು ನಿರಂತರವಾಗಿ ಬಾಧಿಸುತ್ತಿದ್ದುವು.
ದೇಗುಲದಿಂದ ಎದ್ದು ಬಂದವನಿಗೆ ಮನಸ್ಸು ಏನನ್ನೂ ಮಾಡಲು ಹುರುಪು ನೀಡದಂತಾಗಿತ್ತು. ಸೀದಾ ಸಮೀಪದಲ್ಲೇ ಇದ್ದ ಹೊಳೆಯೊಂದರ ಬಳಿ ಹೋಗಿ ದಂಡೆಯ ಮೇಲೆ ಭದ್ರವಾಗಿ ನೆಲೆನಿಂತಿದ್ದ ಕಲ್ಲುಬಂಡೆಯ ಮೇಲೇರಿ ಕುಳಿತು ಸ್ವಚ್ಛಂದವಾಗಿ ಹರಿಯುತ್ತಿದ್ದ ನೀರನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತೆ.
ಆಳದಲ್ಲಿ ಪುಟ್ಟಪುಟ್ಟ ಮೀನುಗಳು,ಕಪ್ಪೆಗಳು,ನೀರ ಹುಳಗಳು ಬೆಳಗಿನ ಆಹ್ಲಾದವನ್ನು ಆಕಡೆಯಿಂದ ಈ ಕಡೆಗೆ ಅಡ್ಡಾಡುತ್ತ ತಮ್ಮ ಕಾರ್ಯಾಲಾಪಗಳಲ್ಲಿ ತೊಡಗಿಕೊಂಡು ಅನುಭಾವಿಸುತ್ತಿದ್ದುವು.
ಪ್ರಶಾಂತ ಹಸಿರು ವಾತಾವರಣದ ಸ್ವಚ್ಛಂದ ಗಿಡಮರಗಳು, ಗದ್ದೆಯ ವಿಶಾಲ ಬಯಲಲ್ಲಿ ಏಕತಾನತೆಯಿಂದ ಬೆಳೆದಿದ್ದ ಭತ್ತದ ಪೈರುಗಳು,
ಸುಯ್ಯನೆ ಬೀಸುವ ಗಾಳಿಗೆ ವಾಲಾಡುವ ಎತ್ತೆತ್ತರದ ಅಡಿಕೆ, ತೆಂಗಿನಮರಗಳ ಆ ನಾಟ್ಯ ಅಂದು ರಮಣೀಯವೆನಿಸಲು ಕಾರಣಗಳಿದ್ದಿರಬಹುದು. ಉಯ್ಯಾಲೆಯಾಡುತ್ತಿದ್ದ ಮನಸ್ಸು ಈಗ ಕೊಂಚ ಹದಕ್ಕೆ ಬರುತ್ತಿದ್ದದ್ದು ಗ್ರಾಸವಾಗುತ್ತಿತ್ತು. ಈ ಭೂಮಿಯ ಅಪ್ಯಾಯಮಾನವಾದ ಸೃಷ್ಟಿಗೆ, ಜೀವಜಂತುಗಳ ಬದುಕಿಗೆಲ್ಲ ನೆಲೆ ಕಲ್ಪಸಿ ;ಚರಾಚರಗಳ ಅಸ್ತಿತ್ವಕ್ಕೆ ಹೋರಾಟದ ಪಂದ್ಯವೊಂದನ್ನು ನೀಡಿ ಸೋಜಿಗವನ್ನು ನೋಡುವ ಶಕ್ತಿಯೊಂದಿರಲೇಬೇಕು ಎಂದನಿಸಿತು. ಅದೇ ಆ ಶಕ್ತಿ ದೇವರೆಂದು ಕರೆದಿರಬಹುದು. ಅಲ್ಲವಾದಲ್ಲಿ ಅಲ್ಲಲ್ಲಿ ಘಟಿಸಿದ,ಕೇಳಿದ,ನೋಡಿದ ಪವಾಡಸದೃಶ ಘಟನೆಗಳಿಗೆಲ್ಲ ತಾರ್ಕಿಕವಾದ ಕಾರಣಗಳ್ಯಾವುದೂ ಸಿಗದಿದ್ದರ ಉದಾಹರಣೆಗಳು ಎಷ್ಟು ಬೇಕು??
ಸುಮ್ಮನೆ ಕುಳಿತವನಿಗೆ ಶಾಂತವಾದ ನೀರು ಕದಡುವ ಕೆಲಸ ಸಿಕ್ಕಿತು. ಒಂದು ಕಲ್ಲನ್ನು ಎತ್ತಿ ಆ ಹೊಳೆಯ ನೀರಿಗೆ ಎಸೆದೆ. ಅಷ್ಟೇ.. ನೀರು ಕದಡಿದ ರಭಸಕ್ಕೆ ಮೀನುಮರಿಗಳು,ಕಪ್ಪೆ-ಹುಳುಗಳೆಲ್ಲ ದೂರಸರಿದುವು. ಕೆಳಗಿದ್ದ ಮಣ್ಣು ಕದಡಿ ಸ್ವಲ್ಪ ನೀರು ಕೆಂಬಣ್ಣಕ್ಕೆ ತಿರುಗಿತು. ಮತ್ತೆ ಸ್ವಲ್ಪ ಹೊತ್ತಿಗೆ ಶಾಂತವಾಗಿ ನೀರು ತಿಳಿಯಾಗುತ್ತ ಸಹಜತೆಗೆ ಮರಳಿತು. ನೀ ಕೇಳಿದ ಹಳೆಯ ಪ್ರಶ್ನೆಗಳು ಈಗ ಚಿರಂತನವಾಗಿ ಕಾಡುವುದಿದೆ.. ನಡುರಾತ್ರಿ ಎದ್ದು ಯೋಚಿಸುವ ಖಯಾಲಿಯನ್ನು ಈಗ ಕಮ್ಮಿ ಮಾಡಿದ್ದೇನೆ. ದುಗುಡಗಳು ಕ್ಷೋಭೆಗೆ,ವಿಪ್ಲವಕ್ಕೆ ದಾರಿ ಮಾಡಿಕೊಟ್ಟಿತು ಎಂಬ ಕಾರಣಕ್ಕೆ ಆಡಿಸಿದಾತ ಬೇಸರಮೂಡಿ ಆಟ ಮುಗಿಸಿದ... ಎಂದು ಗುನುಗುತ್ತಾ ಸುಮ್ಮನಾಗುತ್ತೇನೆ.

No comments:
Post a Comment