ಕಣ್ಣಾಯಿಸಿದವರು

Friday, 12 April 2019

ಮುಲಾಜು

ಹೂಗಂಧದ ಪರಿಮಳವೆಲ್ಲ
ಚೆಲ್ಲಿ ಉಳಿದದ್ದು
ಬರಿ ಮುಳ್ಳೇ.
ಗುಲಾಬಿಗೆ ಬೇಸರವಾದೀತೇ..?
ಹೆಚ್ಚು ಕಮ್ಮಿ ನನಗೂ
ನೆನಪಿರುವುದಿಷ್ಟೇ
ನೀ ಮಿಡಿದ ಭಾವಗಳೆಲ್ಲ
ನೆನಪುಗಳಲಿ ಸಮಾಧಿಯಾಗಿದೆ
ಹೃದಯಕ್ಕೆ ಬೇಸರವಾದೀತೇ..?
ಮುಲಾಜಿಲ್ಲದೆ ಕೇಳುವೆನು
ಹೊತ್ತು ಮೀರುವುದರೊಳಗೆ
ಮುತ್ತು ಎಣಿಸುವ‌ ಕೆಲಸ ಬಿಟ್ಟುಬಿಡು
ತುಟಿಗಳಿಗೆ ಬೇಸರವಾದೀತೇ..?
ಕೊಂದು ಉಳಿಯುವುದು
ನೀನಾದರೆ ನನಗೇನು ದುಃಖವಿಲ್ಲ
ನಿನ್ನೊಟ್ಟಿಗೆ ಹೋರಾಟ ಇಷ್ಟವಿಲ್ಲ
ಸೋಲಿಗೆ ಬೇಸರವಾದೀತೇ..?

No comments:

Post a Comment

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ