ಕಣ್ಣಾಯಿಸಿದವರು

Wednesday, 20 March 2019

ಆಲಾಪ

ಸೆಲ್ಫೂ ಮತ್ತು ಲೈಫು

ಜಗತ್ತು ಬೆಳೆದಂತೆಲ್ಲ ಮಾನವೀಯತೆ ಅನ್ನೋದು ಕ್ಷೀಣ ಆಗ್ತಾ ಇದ್ಯೇನೋ ಅಂತ ಆಗಾಗ ಅನ್ಸತಾನೇ ಇರುತ್ತೆ. ಆದ್ರೆ ಎಲ್ಲೋ ಒಂದ್ಕಡೆ ಅದು ಇನ್ನೂ ಜೀವಂತವಾಗೇ ಇದೆ. ಸ್ವಾರ್ಥನೇ ತುಂಬಿರೋ ಪ್ರಪಂಚದಲ್ಲಿ ನಾವು ಬದುಕಬೇಕಾಗಿ ಬರುತ್ತೆ ಅನ್ನೋದು ಎಷ್ಟು ಸತ್ಯನೋ ಅಷ್ಟೇ ಅಲ್ಲಲ್ಲಿ ಕಾಣ್ಸೋ ಮಾನವೀಯ ಮೌಲ್ಯಗಳನ್ನ ನೈತಿಕತೆಯ ಮಜಲುಗಳನ್ನ ಅನುಭವಿಸುವುದರಲ್ಲಿ ನಾವು ನಮಗರಿವಿಲ್ಲದಂತೆ ವಂಚಿತರಾಗ್ತಾನೇ ಇರ್ತೀವಿ.

    ಎಲ್ಲೆಲ್ಲೂ ಕತ್ತಲು ತುಂಬಿದೆ ಅಂತ ಬಾಯಿ ಬಾಯಿ ಬಡಿದುಕೊಂಡು ದಿನಂಪ್ರತಿ ಕಗ್ಗತ್ತಲಲ್ಲೇ ವಾಸಮಾಡ್ತಾ ಇದ್ರೆ ನಾವು ನಮ್ಮ ಕಣ್ಣುಗಳನ್ನ ಕಳೆದುಕೊಂಡು ಕತ್ತಲಲ್ಲೇ ಸಾಯಾಬೇಕಾಗುತ್ತೆ.‌
ನಮ್ಮ ಜೀವನ ಎಷ್ಟು ವಿಶಾಲ ಅಂತ ಥಿಂಕ್ ಮಾಡ್ತೀವೋ ಅಷ್ಟೇ ಚಿಕ್ದು ಅಂತ ಥಿಂಕ್ ಮಾಡೋ ನಮ್ಮಂತೋರು ಅಲ್ಲಲ್ಲಿ ನಿಮ್ ಅಕ್ಕಪಕ್ಕದಲ್ಲೇ ಓಡಾಡ್ತಾನೇ ಇರ್ತೀವಿ. ಒಂಚೂರು ದೃಷ್ಟಿ ತಿರುಗಿಸಿ ನೋಡಿದ್ರೆ ಕಾಣ್ಸ್ ಬಹುದು. ಈ ಲೈಫ್ ಸಾಲಲ್ಲ ಗುರೂ ಅಷ್ಟು ಕೆಲ್ಸಗಳು ದಿನಾ ನೆನ್ಪಾಗ್ತವೆ‌. ಏನ್ ಮಾಡೋದು ಕನ್ಸುಗಳ ಮೂಟೆ ಹೊತ್ತು ಸಾಗ್ತಾ ಇರೋ ನಮ್ಮಂತ ಅಲೆಮಾರಿಗಳ ಬದುಕಿಗೆ ಒಂದಷ್ಟು ಘಟನೆಗಳು ಇನ್ಸ್ಪೈರ್ ಆಗ್ಬಿಡಬಹುದು. ಅದೇ ನಮ್ ಜೀವ್ನನ ಎಲ್ಲೋ ಕರ್ಕೊಂಡ್ ಹೋಗ್ಬಹುದು. ಯಾವುದೋ ಒಂದು ದಾರಿ ನಿಮ್ಮ ಜೀವ್ನನ ಇನ್ಯಾವ್ದೋ ಗುರಿಕಡೆ ಕೊಂಡೊಯ್ಯಬಹುದು.
ಹಾಗೇ ನಾವ್ ಮಾಡೋ ಪ್ರತಿ ಕೆಲ್ಸ ,ಪ್ರತಿ ಕ್ಷಣ ನಮ್ಮನ್ನ ಹಿಂಬಾಲಿಸ್ತಾನೇ ಇರುತ್ತೆ. ನೆನಪಿಟ್ಕೊಬೇಕಾಗಿದ್ದು ನಾವ್ ಬಂದ ದಾರಿನಲ್ಲ ನಾವ್ ಮುಟ್ಟಬೇಕಾಗಿದ್ ಗುರಿಯನ್ನ. ನಮ್ ಜೊತೆ ನಡಿತಾ ಇರೋ ವ್ಯಕ್ತಿಗಳನ್ನ ಮತ್ತೆ ನಮ್ಗೆ ಸಹಕಾರ ನೀಡ್ತಾ ಇರೋ ಆತ್ಮಗಳನ್ನ ಹಾಗೂ ನಂಬಿರೋ ದೈವವನ್ನ.

           ಲೈಫು ಕೈಗೇ ಸಿಗೊಲ್ಲಾ ಅಂತ ಹೇಳೋರ್ನಾ ತುಂಬಾ ನೋಡಿದೀನಿ ಅಂತವ್ರಲ್ಲಿ ನಾನೂ ಒಬ್ಬ ಅಷ್ಟೇ.. ಯಾವ್ದೋ ರಸ್ತೆ ಹಿಡಿದು ಹಾದಿ ತಪ್ಪಿ ಇನ್ಯಾವ್ದೋ ರಸ್ತೆಯಲ್ಲಿ ಸಾಗ್ತಾ ಇರೋ ಗಾಡಿ ನಮ್ದು. ಸದ್ಯಕ್ಕೆ ಕಂಟ್ರೋಲ್ ನಮ್ ಕೈಲೇ ಇದೆ ಅನ್ನೋದು ಒಂದು ಒಳ್ಳೆ ವಿಷಯ ಆದ್ರೆ ಮುಂದೆ ಯಾವ್ ದಾರಿ ಹಿಡಿದ್ರೆ ಎಲ್ಲಿ ಹೋಗಬಹುದು ಅಂತ ಗೊತ್ತಿಲ್ದೇ ಇರೋದು ಇನ್ನೊಂದು ವಿಷಯ.
 ಮರೆತೇ ಹೋಗಿದ್ದೆ ಹಣದ್ ವಿಷಯ ಬಂದಾಗ ಏನ್ ಮಾಡೋದು.. ಜಗತ್ತು ನಡೀತಾ ಇರೋದೇ ಹಣದ್ ಮೇಲೇ ಅಂತ ಹೇಳೋ ಅಪ್ಪ. ಪ್ರೀತಿ ವಿಶ್ವಾಸದ ಮುಂದೆ ಹಣ ಎಲ್ಲ ಕ್ಷಣಿಕ ಅನ್ನೋ ಅಮ್ಮ ಇವೆಲ್ಲವುಗಳ ನಡುವೆ ಒದ್ದಾಡ್ತಾ ಇರೋ ಬರೋ ಖಾಲಿ ಲೈಫಲ್ಲಿ ಕೊನೆಗೊಂದ್ ಫುಲ್ಸ್ಟಾಪ್ ಇಡೋಕಾದ್ರೂ ಏನಾದ್ರೂ ಕಿತ್ ದಬಾಕ್ಬೇಕು ಅನ್ನೋ ಮನ್ಸು. ಉಫ್!! ಎಷ್ಟು ಒದ್ದಾಟ ನೋಡಿ. ನಾವ್ ಹಂಗೆಲ್ಲಾ ಸೋಲು ಒಪ್ಪಿಕೊಳ್ಳೋರಲ್ಲ ಅಂತ ಪದೇ ಪದೇ ಲೈಫಿಗೆ ಹೇಳ್ತಾ ಇದ್ರೂ ನಮ್ಮನ್ನ ಸೋಲ್ಸೋಕೇ ಟ್ರೈ ಮಾಡ್ತಾನೇ ಇರುತ್ತೇನೋ ಅನ್ಸ್ಬಿಡತ್ತೆ. ಗೊತ್ತಿಲ್ಲ ಇದುವರ್ಗೆ ಅಂತಾ ಅನುಭವ ಏನೂ ಆಗಿಲ್ಲ ಆದ್ರೂ ಹೇಳ್ತೀನಿ ಜಗತ್ತು ವಿಶಾಲ ಆಗಿದೆ, ಕನಸುಗಳನ್ನೂ ವಿಶಾಲ ಮಾಡ್ಕೋ ದಾರಿನೂ ವಿಶಾಲವಾಗೇ ಇರತ್ತೆ ಅಂತ ಹೇಳ್ಕೊತ್ತಾ ಇರ್ತೀನಿ. ಬದುಕಿದ್ರೆ ಖುಷಿಯಾಗೋವಷ್ಟು ಬದುಕಿಬಿಡು ಇಲ್ಲಾ ಅಂದ್ರೆ ಹಣೆಬರಹ ಅಂತ ತೆಪ್ಪಗಿರು ಅನ್ನೋದು ನಮ್ ಪಾಲಿಸಿ.


ಲೈಫಿನ ರೇಸಲ್ಲಿ ಓಡ್ತಾ ಇರ್ಬೇಕು ಪಕ್ದಲ್ಲಿ ಇನ್ಯಾರೋ ಓಡ್ತಾ ಇರ್ತಾರೆ.. ಆದ್ರೆ ನೀನು ನಿನ್ನದೇ ಟ್ರ್ಯಾಕಲ್ಲಿ ಓಡ್ಬೇಕು‌ ಅವನು ಮುಂದೆ ಹೋದ ಅಂತ ನೀನ್ ಅವನ ಟ್ರ್ಯಾಕ್ಗೆ ಹೋದ್ರೆ ಯಾವ್ ಗ್ಯಾರಂಟಿನೂ ಇಲ್ಲ ನೀನೂ ಮುಂದೆ ಬರ್ತೀಯಾ ಅಂತ ಅದಕ್ಕೇ ನಿನಗೇ ಅಂತನೇ ಸಪರೇಟ್ ಟ್ರ್ಯಾಕ್ನ ಲೈಫು ಅನ್ನೋದು ಕೊಟ್ಟಿರತ್ತೆ.
ಹೋಗ್ತಾ ಇರು ಜಿಗಿತಾ ಇರು ಮನಬಂದಂಗೆ ಸಾಗ್ತಾ ಇರು ಅಂತ  ಒಂದೆರಡ್ಸಲ ಅನ್ಸಿತ್ತು. ಮತ್ತೆ ಹಾಗೇ ಅನ್ಕೊಂಡು ಏನೋ ಮಾಡೋಕೋಗಿ ಇನ್ನೇನೋ ಮಾಡಿ ಮತ್ತೇನೋ ಆಗೋವಂತ ರಿಸ್ಕ್ ತಗೋಳೋ ಗೋಜಿಗೆ ಹೋಗ್ಲಿಲ್ಲ. ಮನುಷ್ಯ ನೀನು ಸಾಧಿಸೋ ತನ್ಕನೂ ದೂಷಿಸ್ತಾನೇ ಇರ್ತಾನೆ. ಯಾವಾಗ ನೀನು ಅವನಿಗೆ ಎದೆಕೊಟ್ಟು ನಿಂತು ನೀನು ಸರಿ ಇದೀಯಾ ಅಂತ ಪ್ರೂವ್ ಮಾಡ್ತೀಯೋ ಆಗ್ಲೇ ಅವ್ನು ನೀನು ಸರಿ ಇದೀಯಾ ಅಂತ ಅಪ್ರೂವಲ್ ಮಾಡ್ತಾನೆ. ಅಂದ್ರೆ ನನ್ನ ದಾರಿ ಸರಿ ಇದೆ ಅಂತ ಇನ್ಯಾರಿಂದನೋ ಸರ್ಟಿಫಿಕೇಟ್ ಪಡಿಬೇಕು ಅನ್ನೋದು ಖಾತ್ರಿಯಾಯ್ತು.

    ಮೊನ್ನೆ ಯಾರೋ ಪಾಪ ಕಾಲು ಸ್ವಲ್ಪ ಊನವಾಗಿತ್ತು. ಕುಂಟುತ್ತಾ ನಡೆದು ಹೋಗ್ತಾ ಇದ್ದ.‌ ಉರಿ ಬಿಸಿಲು ಗೊತ್ತಲ್ಲ ಮಿನಿಮಮ್ ೩೫ ಡಿಗ್ರಿ ಇತ್ತು. ಮಧ್ಯಾಹ್ನ ಒಂದೂವರೆ ಇರ್ಬಹುದು.
ಆ ಬಿಸಿಲಲ್ಲಿ ಅದೂ ಸಿಟಿಯಲ್ಲಿ ಯಾರು ತಾನೇ  ವಾಹನ ನಿಲ್ಸ್ತಾರೆ. 
ಅವ್ನೂ ಯಾವ ವಾಹನಕ್ಕೂ ವೇಟ್ ಮಾಡ್ತಾ ಇರ್ಲಿಲ್ಲ. ತನ್ನ ಕಾಲನ್ನ ಎಳೆದುಕೊಂಡೇ ನಡೆದು ಹೋಗ್ತಾ ಇದ್ದ. ಅಷ್ಟೇ ಹಿಂದೆ ಇಂದ ಯಾರೋ ಸ್ಕೂಟರ್‌ ಮೇಲೆ ಬಂದ ಅಂಕಲ್ ತನ್ನ ಗಾಡಿ ನಿಲ್ಸಿ ಅವ್ನನ್ನ ಹತ್ತಸಿಕೊಂಡು ಡ್ರಾಪ್ ಮಾಡ್ದ. ಅದರಲ್ಲೇನೂ ವಿಶೇಷ ಇಲ್ಲ. ಆದ್ರೆ ನನಗನ್ನಿಸಿದ್ದು ನಾವ್ ಯಾರ್ಗೂ ವೇಟ್ ಮಾಡ್ದೇ ಸಾಗ್ತಾ ಇರ್ಬೇಕು  ಯಾರಾದ್ರೂ ನಮ್ಮನ್ನ ನೋಡೇ ನೋಡ್ತಾರೆ. ಜಗತ್ತು ವಿಶಾಲವಾಗಿದೆ ಅನ್ನೋದು ಮತ್ತೆ ಮತ್ತೆ ಕಾಣಿಸ್ತಾನೇ ಇರುತ್ತೆ‌.

ಹಿಂಗೇ ಒಂದಿನ ನೋಡಿದ್ದು, ರಸ್ತೆ ಕ್ರಾಸ್ ಮಾಡೋಕೆ ಅಂತ ಒಂದು ನಾಯಿ ಟ್ರೈ ಮಾಡ್ತಾ ಇತ್ತು. ವೇಗವಾಗಿ ಒಂದರ ಹಿಂದೆ ಇನ್ನೊಂದು ವೆಹಿಕಲ್ ಬರ್ತಾ ಇತ್ತು. ನಾಯಿ ಎರ್ಡ್ ಸಲ ಅರ್ಧ ರಸ್ತೆಗೆ ಹೋಗಿ ಮತ್ತೆ ವಾಪಸ್ ಬಂತು. ಅಕ್ಕಪಕ್ದಲ್ಲಿ ವೆಹಿಕಲ್ ಜೋರಾಗಿ ಬರ್ತಾ ಇರೋದ್ನ ನೋಡಿ ಅದಕ್ಕೆ ಇನ್ನೇನು ಮಾಡೋಕಾಗಲ್ಲ ಅಂತ ಯೋಚ್ನೆ ಬಂತೇನೋ..  ಕಣ್ಮುಚ್ಚಿ ಒಂದೇ ಏಟು ಎರಡೇ ಸೆಕೆಂಡ್ ಅಷ್ಟೇ ಅದು ದಾಟಿದ್ದೂ ಕಾಣ್ಸ್ಲಿಲ್ಲ. ಈ ಕಡೆ ಇಂದ ಆ ಕಡೆ ದಾಟಿ ಬಾಲ ಅಲ್ಲಾಡಿಸ್ತಾ ಹೋಗ್ತಾ ಇತ್ತು. ನೋಡ್ತಾ ಇದ್ದ ನನಗೆ ನಾನೂ ದಾಟ್ಬೇಕು ಅಂತ ಯೋಚನೆ ಮನ್ಸಲ್ ಬಂದ್ರೂ ಭಯ ಒಂದೆಜ್ಜೆ ಮುಂದೇನೇ ಇರತ್ತೆ ನೋಡಿ.!!

ಇವೆಲ್ಲ ಚಿಕ್ಪುಟ್ಟ ಇನ್ಸಿಡೆಂಟ್ಗಳು ಬದುಕಿಗೆ ಹೇಗೆಲ್ಲಾ ದಾರಿ ತೋರ್ಸಬಹುದು ಅನ್ನೋದು ನಾವು ಅರ್ಥ ಮಾಡ್ಕೊಳ್ಳೋದೊಂದೇ ಬಾಕಿ ಇರುವಂತದ್ದು‌. ಸುತ್ತಾ ಜನ ಇದ್ದಾರೆ ಕೆಲವೊಮ್ಮೆ ಭಯ ಜನರಿಂದನೇ ಸೃಷ್ಟಿ ಆದ್ರೆ ಇನ್ನ್ ಕೆಲವೊಮ್ಮೆ ನನ್ ಸುತ್ತ ಜನ ಇದಾರೆ ಅನ್ನೋ ಧೈರ್ಯ ಅದರ ಹತ್ತರಷ್ಟು ಶಕ್ತಿಯುತವಾಗಿರುತ್ತೆ‌. ಹಾಗೇ ಮುನ್ನುಗ್ಗಬೇಕಾದ ಕರ್ತವ್ಯ ನಮ್ ಮೇಲಿದೆ‌. ಮನುಷ್ಯ ಇರೋತನ್ಕ ಮಾನವೀಯತೆಯೂ ಇರುತ್ತೆ. ಹುಡುಕ್ತಾ ಹುಡುಕ್ತಾ ಸಾಗೋಣ‌. ಒಳಗಿರೋ   ಹತಾಷೆಯನ್ನ  ಕಮ್ಮಿ ಮಾಡ್ತಾ ಬದುಕೋಣ.. ಮತ್ತೆ ಸಿಗೋಣ ಪ್ರೆಂಡ್ಸ್..!!

Tuesday, 19 March 2019

ನಮ್ದೂ ಒಂದ್ ಪುರಾಣ

ತೋಚಿದ್ದ ಗೀಚಿದ್ದು

ಜಗತ್ತು ಬೇಸರವಾದಾಗೆಲ್ಲ ಎಲ್ಲಾದ್ರೂ ದೂರ ಹೊರಟೋಗ್ಬಿಡಣ ಅನ್ಸತ್ತೆ. ಆದ್ರೆ ಮತ್ತೆ ಅದ್ಯಾವುದೋ ಅಂತರಾತ್ಮ ಒಳಗಿಂದೊಳಗೇ ಉತ್ತೇಜನ ನೀಡ್ತಾನೆ ಇರತ್ತೆ. ಅದರ ಗ್ರಹಿಕೆ ಒಂದ್ಸಲ್ಪ ಕಷ್ಟನೇ  ನನ್ನಂತ ಹದಿಹರೆಯದ ಹುಡುಗ್ರಿಗೆ. ಏನ್ ಮಾಡೋದು ಆರಕ್ಕೇರಲ್ಲ ಮೂರಕ್ಕಿಳಿಯಲ್ಲ ಅನ್ನೋವಂತ ತ್ರಿಷಂಕು ಸ್ಥಿತಿ ನಮ್ಮಂತ ಡಿಗ್ರಿ ಹುಡ್ಗರ ಕಾಮನ್ ಪ್ರಾಬ್ಲಮ್ಮು. ಇನ್ಯಾವ್ದೋ ವಯಸ್ಸಿನ ತುಮುಲಗಳನ್ನೆಲ್ಲ ನಾವು ಹೆಂಗೋ ಕಂಟ್ರೋಲ್ ಮಾಡ್ಕೊಳೋವಷ್ಟು ಕೆಪಾಸಿಟಿ ಇದೆ ಅನ್ನೋದಂತೂ ಸತ್ಯ. ಅದೇ ನಮ್ಗಿರೋ ಒಂದಷ್ಟು ಒಳ್ಳೇ ಗುಣಗಳ ಲಿಸ್ಟಲ್ಲಿ ಇರೋದು. ನನ್ಮಗಂದ್ ಏನ್ ಪ್ರಾಬ್ಲಮ್ಮು ಅಂತ ನಂಗೇ ಇನ್ನೂ ಅರ್ಥ ಆಗ್ತಾ ಇಲ್ಲ ಅಂತದ್ರಲ್ಲಿ‌  ಜಗತ್ತಿನ್ ಬಗ್ಗೆ ಜನ್ರ ಬಗ್ಗೆ ಎಲ್ಲಾ ಒಂತರಾ ಭಯ ಒಳಗೊಳಗೇ.

ಭಯ ಅಂದ್ರೆ ಮತ್ತೇನಿಲ್ಲ ಕಣ್ರೀ ; ಇನ್ನೇನ್ ಎರಡ್ಮೂರ್ ವರ್ಷ ನಾವೂ ಸಮಾಜಕ್  ಎಂಟ್ರಿ ಕೊಡ್ತೀವಿ ಆದ್ರೆ ಅಷ್ಟ್ರಲ್ಲಿ ಗುಂಡಗಿರೋ ಜಗತ್ತು ಚೌಕ ಆಗಲ್ಲ ಅನ್ನೋ ಕಾನ್ಫಿಡೆನ್ಸ್ ಅಂತೂ ಇದೆ. ಭವಿಷ್ಯದ್ ಬಗ್ಗೆ ಎಲ್ಲಾ ಜಾಸ್ತಿ ಚಿಂತೆ ಮಾಡೊವ್ನಲ್ಲ ನಾನು. ಬಸ್ ಹತ್ತಿದೀವಿ ಅಂದ್ರೆ ಟಿಕೆಟ್ ತಗೋಬೇಕು ಇಲ್ಲಾ ಅಂದ್ರೆ ಕಂಡಕ್ಟರ್ ಅರ್ಧಕ್ಕೆ ಇಳ್ಸಿ ಮುಂದಕ್ಕ ಹೋಗ್ಬುಡ್ತಾನೆ ಅನ್ನೋ ಚಿಕ್ಕ ದುಗುಡ ಅವಾಗವಾಗ ಕಾಡ್ತಾ ಇರ್ವಂತದ್ದು. ಇದ್ ಬಿಟ್ರೆ ಇನ್ನೇನಾದ್ರೂ ಹೇಳಣಾ ಅಂದ್ರೆ ನಮ್ ಚಿಕ್ ಲೈಫ್ ಬಗ್ಗೆ ಹೇಳ್ಬೇಕು
ಅದ್ರಲ್ಲೇನೂ ಸ್ಪೆಷಲ್ಲಾಗ್ ಹೇಳ್ವಂತದ್ದೇನಿಲ್ಲ. ಚಿಕ್ ಫ್ಯಾಮಿಲಿ ಮಿಡ್ಲಕ್ಲಾಸ್ ಮನೆ. ಸಣ್ ಜಮೀನು ಹಳ್ಳ ಕೊಳ್ಳ.. ಅದ್ನೆಲ್ಲ ಹೇಳ್ ಏನ್ ಮಾಡೋದು ಮದ್ವಿಗ್ ಜಾತಕ ಕೊಡ್ತಾ ಇದೀನಾ? 🙄😅

ಹಿಂಗೇ ವಾಟ್ಸಾಪು, ಫೇಸ್ಬುಕ್ಕು, ನಮ್ ಜೀವ್ನದ್ ಪ್ರೆಂಡ್ಸು. ಬರವಣಿಗೆ ಏನೂ ಹೇಳ್ವಂತದ್ದೇನ್ ಮಾಡಿಲ್ಲ. ಮನ್ಸಾದಗ್ ಹಿಂಗಿತದ್ ಸಣ್ಣಪುಟ್ಟ ಅರ್ಥ ಇಲ್ದೇ ಇರೋ ಕವನ ಗೀಚ್ತೀನಿ..
ಬಿಟ್ರೆ ಬುಕ್ಸ್ ಓದೋ ಹವ್ಯಾಸ 'ಅವಾಗಾವಾಗ ಬೆಳ್ಸ್ಕೋತಾ ಇರ್ತೀನಿ'.
ಇದೇ ನಮ್ ಒಂತರಾ ಗಿಲ್ಟ ಸುರ್ವಾಗಕ್ ರೀಸನ್ ಅನ್ಕೋಬಹುದು. ನಾನ್ ಓದೋಕ್ ಸ್ಟಾರ್ಟ್ ಮಾಡ್ದ್ರೆ ಅದ್ರಲ್ ಬರೋ ಕ್ಯಾರೆಕ್ಟ್ರ ಗಳೆಲ್ಲಾ ನಮ್ ಸುತ್ಮುತ್ಲೇ ಓಡಾಡ್ತಾ ಇರೋವಂಗೆ ಅನ್ಸತ್ತೆ. ಕೆಲವೊಮ್ಮೆ ನಾನೇ ಏನೋ ಅಂತನೂ ಅನ್ಸ್ಬಿಡತ್ತೆ. ಆದ್ಯಾತ್ಮ ಏನೂ ಗೊತ್ತಿಲ್ಲ ಆದ್ರೂ ಜೀವ್ನ ಸುಂದರವಾಗೇನೂ ಕಾಣ್ಸ್ತಿಲ್ಲ. ಇರೋ ಕ್ಷಣಗಳನ್ನ ಹಾಯಾಗ್ ಕಳ್ದ್ಬಿಡೋಣ ಅಂತ ಯೋಚ್ನೆ ತುಂಬಾ ಸಲ ಬರ್ತಾ ಇರ್ತವೆ. ಮೊದಲ್ನೇದಾಗಿ ಇನ್ನೂ ಗೋಲ್ ಅನ್ನೋದನ್ನ ಸೆಟ್ ಮಾಡ್ಕಂಡಿಲ್ಲ ಅನ್ನೋದೇ ಈಗ ಸದ್ಯಕ್ ಕಾಡ್ತಾ ಇರೋ ಗಿಲ್ಟ್ ಪಟ್ಟಿಗೆ  ಸೇರ್ಸ್ಕೋಬಹುದೇನೋ..

ಮಗ್ಗಿ ಬಾಯ್ಪಾಠ ಮಾಡ್ತಿದ್ವಲ್ಲ ಚಿಕ್ಕವ್ರಿದ್ದಾಗ ಅದೇ ಒಂದೊಂದ್ಸಲ ಬೆಟರ್ ಅನ್ಸತ್ತೆ.ಯಾಕ್ ಗೊತ್ತಾ ನಿಜ ಹೇಳ್ಬೇಕಂದ್ರೆ ಆಗ ಅಂಕಿ ಸಂಖ್ಯೆಗಳಂದ್ರೆ ಏನಂತನೇ ಗೊತ್ತಾಗ್ದೇ ಇರೋ ಕಾಲದಲ್ಲಿ ನಾವ್ ಅದನ್ನ ಕಲ್ತಿರ್ತಿದ್ವಿ. ಅದೇ ಈಗ ಏನನ್ನೂ ಕಲೀಬೇಕಂದ್ರೆ ಅದು ತಲೆಗೋದ್ರೆ ಸಾಲಲ್ಲ ಮಿದುಳೊಳಗೆ ಹೋಗಿ ಅಲ್ಲೇನೇನೋ ಪಿಯುದಲ್ ಕೆಮಿಸ್ಟ್ರಿ ಲ್ಯಾಬಲ್ಲಿ ಮಾಡಿದ್ ಎಕ್ಸ್ಪರಿಮೆಂಟ್ ಗಿಂತ ಜಾಸ್ತಿ  ಕೆಮಿಕಲ್ ರಿಯಾಕ್ಷನ್ ನಡ್ದು ಹಂಗೇ ಒಂದೇ ಸಲ ಕಕ್ಕಿಬಿಡ್ಬೇಕು ಅನ್ಸತ್ತೆ. ಪುಣ್ಯಕ್ಕೆ ನಾವ್ ಮಾಡೋ ಯೋಚನೆಗಳ ರಿಯಾಕ್ಷನ್ಗಳಿಂದ ಫ್ಯೂಮ್ಸ್ ಬಂದು ವಾತಾವರಣ ಕೆಡಲ್ಲ ಅನ್ನೋದೊಂದೇ ಖುಷಿ ವಿಷಯ. ಇಲ್ಲಾ ಅಂದ್ರೆ ಇಷ್ಟೊತ್ಗೆ ಯಾರ್ಯಾರ್ ಮನೆ ಮಕ್ಳೆಲ್ಲಾ ನಮ್ ರ್ಯಾಂಕ್ ನೋಡಿ ಉರ್ಕೊಂತಾ ಕೂತಿರ್ತಿದ್ರೇನೋ ಅನ್ಸತ್ತೆ. ಆಕ್ಚುಲಿ ಅವೆಲ್ಲಾ ಸುಳ್ಳು ಅನ್ನೋದನ್ನ ಲೈಫು ಅವಾಗವಾಗ ತೋರ್ಸ್ತಾ ಇರತ್ತೆ. ಏನ್ ಮಾಡ್ಲಿ ಜಗತ್ತು ಗುಂಡಗಿದೆ ಆದ್ರಿಂದ ಇಂತದ್ರಿಂದ ಎಷ್ಟೇ ಮನ್ಸು ದೂರ ಹೋದ್ರೂ ಮತ್ತೆ ಬಂದ್ಬುಡತ್ತೆ, ಅದೇ ಜಾಗಕ್ಕೆ ಎಲ್ಲಿಂದ ಹೊರ್ಟಿದ್ನೋ ಅಲ್ಲಿಗೇನೇ..

ಯಾರ್ನೋ ತಿದ್ದೋ ಮನ್ಸು ನಂಗಂತೂ ಇಲ್ಲ. ಯಾಕಂದ್ರೆ ನಾನ್ ಪಕ್ಕಾ ಸೈನ್ಸ್ ನಂಬೋ ಮನ್ಷ. ಅದ್ಕೇ ನಂಗ್ ಅವಾಗಾವಾಗ ಕಾಂಟ್ರವರ್ಸಿಗಳು ನಡೀತಾ ಇರತ್ತೇನೋ ಅನ್ಸತ್ತೆ. ನಿಜ ಹೇಳ್ಬೇಕಂದ್ರೆ ನಂಗೆ ಯಾವ್ದೇ ಧರ್ಮದ್ ಮೇಲೂ ನಂಬಿಕೆ ಅನ್ನೋದು ಇಲ್ಲ ಅಂತನೇ ಹೇಳ್ಬೇಕು. ಆದ್ರೆ ದೇವ್ರ ಮೇಲೆ ನಂಬಿಕೆ ಇಲ್ಲ ಅಂತೇನಿಲ್ಲ. ಅದನ್ನ ಅವ್ರವ್ರು ಕಾಣೋ ರೀತಿ ಬೇರೆ ಅಷ್ಟೇ. ಒಳ್ಳೆ ದಾರಿಯಲ್ಲಿ ಸಾಗ್ಬೇಕಂದ್ರೆ ಗುರು ಇರಬೇಕು.ಮಠ ಇರ್ಬೇಕು, ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು ಏನೇ ಇರಲಿ ಅವೆಲ್ಲ ಇರ್ಬೇಕು ಆಗ್ಲೇ ಮನುಷ್ಯನಿಗೆ  ಯಾವುದೋ ಒಂದು ಅದೃಶ್ಯ ಶಕ್ತಿಯ ಮೇಲಿನ ಭಯ ಅಥವಾ ನಂಬಿಕೆ ಅವ್ನನ್ನ ಮುನ್ನಡೆಸುತ್ತೆ ಅನ್ನೋದನ್ನ ಪ್ರಬಲವಾಗಿ ನಂಬಿರೋ ಬಡಜೀವ ನಮ್ದು.  ಸದ್ಯದ್ ಮಟ್ಟಿಗೆ ಕಾಡ್ತಾ ಇರೋ ಮೈನ್ ಕೊಷ್ಚನ್ ಇದೇ ಇರಬಹುದೇನೋ..
   ಜಗತ್ತು ಮೌಢ್ಯ, ನಂಬಿಕೆ ಮತ್ತು ನಾಸ್ತಿಕತೆ ನಡುವಿನ ಹೋರಾಟದಲ್ಲಿ ವಿಲವಿಲ ಅಂತ ಒದ್ದಾಡ್ತಾ ಇದೆ ಅಂತ ಆಗಾಗ ಅನ್ಸ್ತಾ ಇರತ್ತೆ. ಇಷ್ಟೊಂದ್ ವಿಷಾಲವಾದಂತ ವಿಷಯದ್ ಬಗ್ಗೆ ಯಾರೋ ಕೊಡುವಂತಹ ಸ್ಟೇಟ್ಮೆಂಟ್ಗಳನ್ನೋ ಅಥವಾ ಡೆಫಿನೇಷನ್ನುಗಳಲ್ಲೆಲ್ಲಾ ನಾನ್ ನಂಬಿಕೆ ಇಟ್ಟವ್ನಲ್ಲ. ನಂದೊಂತರಾ ಜೀವ ವಾಸ್ತವದಲ್ಲಿ ನಂಬಿಕೆ ಜೊತೆಯಲ್ಲೇ ಬದುಕ್ತಾ ಇದೀನಿ ಅಷ್ಟೇ.
ಕೆಲವೊಮ್ಮೆ ಮೌಢ್ಯವೂ ಸರಿ ಅಂತ ಅನ್ಸಿದ್ರೆ ಇನ್ನೊಮ್ಮೆ ನಾಸ್ತಿಕವಾದವೂ ಸರಿ ಅಂತ ಅನ್ಸತ್ತೆ . ಆದ್ರೆ ಕನ್ಕ್ಲೂಜನ್ನಿಗೆ ಬರೊವಂತ ಅನಿವಾರ್ಯತೆ ಇಲ್ಲ ಅಂತನೇ ಪದೇ ಪದೇ ಮನ್ಸು ಹೇಳ್ತಾ ಇರುತ್ತೆ. ಯಾಕ್ ಗೊತ್ತಾ ಸೃಷ್ಟಿಯೇ ಇನ್ನೂ ಒಂದು ಬಿಡಿಸಲಾಗದ ರಹಸ್ಯ ಆಗಿರುವಾಗ ಅಂತ್ಯವೂ ಒಂದಷ್ಟು ಊಹೆಗಳಲ್ಲೇ ಸಾಗ್ತಾ ಇರೋವಾಗ ನಾನ್ಯಾಕೆ ಇದನ್ನೇ ಸತ್ಯ ಅಂತ ನಂಬಬೇಕು ಅನ್ನೋವಂತದ್ದು.

ಅದಕ್ಕೆ ಹೇಳೋದು ಒಂದ್ ವಿಷ್ಯಕ್ಕೆ ಮೂರು ಆಯಾಮ ಇರತ್ತೆ ಅನ್ನೋದು. ಒಂದು ನಿನ್ನ ಸ್ಥಾನದಿಂದ ನೋಡ್ಬೇಕು ಇನ್ನೊಂದು ಎದುರಿನವನ ಸ್ಥಾನದಿಂದ ಮತ್ತೊಂದು ಅದ್ರ ವಾಸ್ತವದ ಸ್ಥಾನದಿಂದ ನೋಡೋವಂತದ್ದು. ಇಷ್ಟ್ ಸಾಕು ಅನ್ಸತ್ತೆ. ಇವನ್ನೆಲ್ಲಾ ಬರ್ದು ಹಗುರ ಆಗ್ಬೇಕು ಅನ್ಸ್ತು ಬರ್ದೆ. ಯಾರೋ ಹೇಳ್ದ್ರು ಕಾಡ್ತಾ ಇರೋದ್ನೆಲ್ಲ ಬರ್ದಿಡು ಅಂತ. ನೋಡೋಣ ಸಾಗ್ತಾ ಸಾಗ್ತಾ ಮತ್ತೆ ಸಿಗೋಣ..
 

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ