ಕಣ್ಣಾಯಿಸಿದವರು

Friday, 8 February 2019

ಜಗವೇತಕೆ‌ ಹೀಗೆ??


ಅವನಿಗೊಂದು ಅನುಮಾನ ಜಗವೇತಕೆ ಹೀಗೆ?

ಬಯಕೆ ಬಿಟ್ಟ ಸಂತ ಬದುಕ ಕಟ್ಟಿದ
ಬದುಕು ಬಿಟ್ಟ ಚಿಟ್ಟೆ ಬಯಕೆ ಕಟ್ಟಿತು..

ಕೊಳೆಯಕಳೆದು ಬಟ್ಟೆ ಬಣ್ಣವಾಯಿತು
ತೊಡೆದು ಕೊಳೆಯ ಉದಕವದುವೆ ವೇದ್ಯವಾಯಿತು

ಇಳೆಯನಿರುದು ಚಿನ್ನವದುವೆ  ಆಭರಣವಾಯಿತು
ಮೆತ್ತ ಮಣ್ಣು ಅಮ್ಮನಂತೆ ಗೌಣವಾಯಿತು

ಬಾಗಿ ಬೆಳೆದ ಮರವು ಇಂದು ಆಲವಾಯಿತು
ತೂಗಿ ಬೆಳೆದ ಬಳ್ಳಿಗದುವೆ ಸಾಲವಾಯಿತು..

ಕವಿದ ಮೋಡ ಸಾಗಲೆಂದು ಹರಕೆ ಹೊತ್ತರು
ಮಳೆಯ ಮೋಡ ಬಾರದೆಂದು ತನುವ ತೆತ್ತೆರು..

ಚಿತ್ತ ಸಮತೆಯತ್ತ ಗುರುವು ದೃಷ್ಟಿಯಿಟ್ಟರು
ದೃಷ್ಟಿಯೆಡೆಗೆ ಶಿಷ್ಯರೆಲ್ಲ ಚಿತ್ತ ಹರಿಯಬಿಟ್ಟರು..

ಅವನಿಗೊಂದು ಅನುಮಾನ ಜಗವೇತಕೆ ಹೀಗೆ??




No comments:

Post a Comment

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ