ತೋಚಿದ್ದ ಗೀಚಿದ್ದು...
ಬೆಳಕು ಬೆಳಕು..
ಹೆಚ್ಚು ಹೊತ್ತು ಹಸಿಯಾಗಿರದಿದ್ದರೂ
ಇದ್ದಷ್ಟೇ ಹೊಸತು..
ದೀನ ನಯನಗಳು ದಣಿವಂತೆ
ದುನಿಯಾಗುಂಟ ಹಾಸಿತು
ಕೆಂಪು ಕೇಸರಿ ಹಸಿರ ಹೊದಿಕೆ
ರಾಚುವಂತ ರಂಗು
ಅಲ್ಲೆಲ್ಲೋ ಬಿಳಿಯ ಬಳಿಯುವ
ತವಕ ನಡುವೆಲ್ಲಾದರೂ ಕಂಡೀತೋ
ಎಂಬ ತುಡಿತ
ಚದುರುವ ರಿಂಗುರಿಂಗು ರಂಗಿನ ರಂಗ
ಅರೆಕ್ಷಣವಷ್ಟೇ ಮತ್ತೆ ಅದೇ ರೇಸಿಗೆಯ ರೋಗ..
ರೂಪರಾಧೆಯ ಕರೆಯ ರಾಗ..
ಕೆಂಪು ಕಾಣದ ಕಲಾ ಕುಸುರಿ
ಮೈ ಮನದ ರೂಪ ರೂವಾರಿ
ಮತ್ತೆ ಮಾತು ಮಾಯಾ ಲಹರಿ
ಚೆಲುವ ಬೆಳಕು ಬಣ್ಣದ ಬುಗುರಿ
--ರತೀಶ್ ಹೆಬ್ಬಾರ್(ಬರ್ಯಾಣ-೬)
baryaana.blogspot.in
![]() |
| ದಸರಾ ೨೦೧೮ |
![]() |
| ದೀಪಾವಳಿ ೨೦೧೮ |
ಹೆಚ್ಚು ಹೊತ್ತು ಹಸಿಯಾಗಿರದಿದ್ದರೂ
ಇದ್ದಷ್ಟೇ ಹೊಸತು..
ದೀನ ನಯನಗಳು ದಣಿವಂತೆ
ದುನಿಯಾಗುಂಟ ಹಾಸಿತು
ಕೆಂಪು ಕೇಸರಿ ಹಸಿರ ಹೊದಿಕೆ
ರಾಚುವಂತ ರಂಗು
ಅಲ್ಲೆಲ್ಲೋ ಬಿಳಿಯ ಬಳಿಯುವ
ತವಕ ನಡುವೆಲ್ಲಾದರೂ ಕಂಡೀತೋ
ಎಂಬ ತುಡಿತ
ಚದುರುವ ರಿಂಗುರಿಂಗು ರಂಗಿನ ರಂಗ
ಅರೆಕ್ಷಣವಷ್ಟೇ ಮತ್ತೆ ಅದೇ ರೇಸಿಗೆಯ ರೋಗ..
ರೂಪರಾಧೆಯ ಕರೆಯ ರಾಗ..
ಕೆಂಪು ಕಾಣದ ಕಲಾ ಕುಸುರಿ
ಮೈ ಮನದ ರೂಪ ರೂವಾರಿ
ಮತ್ತೆ ಮಾತು ಮಾಯಾ ಲಹರಿ
ಚೆಲುವ ಬೆಳಕು ಬಣ್ಣದ ಬುಗುರಿ
--ರತೀಶ್ ಹೆಬ್ಬಾರ್(ಬರ್ಯಾಣ-೬)



No comments:
Post a Comment