ಕಣ್ಣಾಯಿಸಿದವರು

Tuesday, 13 November 2018

ನಗುತ್ತೇವೆ ಒಮ್ಮೆ

ತೋಚಿದ್ದ ಗೀಚಿದ್ದು...

ನಗುತ್ತೇವೆ ನಾವೂ ಕೂಡ

ಎಷ್ಟು ದಿನಕ್ಕೆ ಆ ಕೋಪ
ದೂರ ಸರಿದಂತೆ ಬೆಳೆಯುವುದು
ಮಂಜುಗಡ್ಡೆ ಘನೀಕರಿಸುತ್ತಾ
ನೀರಾವಿಯಾಗಿ ದೂರಾಗಬೇಕು
ಆ ರವಿಯ ಮೋಹಕ ರಶ್ಮಿಗೆ

ಮುನಿಸು ಮಸಿಯಾಗುವುದು
ಕಪ್ಪು ಛಾಯೆ ಹರಡುವುದು
ಇದ್ದಿಲು ಉರಿದಂತೆಲ್ಲ
ಬೆಳಕು ಕ್ಷೀಣವಷ್ಟೇ
ಕರಿ ನೆರಳ ಸೂಸುವ ಬತ್ತಿಯಡಿ

ಮರೆಯುವಂತೆಲ್ಲ ಮರೆತುಬಿಡು
ಅನವಶ್ಯಕ ಕಂತೆಗಳ ಕಾದಾಟ
ಮತ್ತೆಂದೂ ನೆನಪಿಸುವುದು
ತರವಲ್ಲ ಗತಿಸಿದ ಘಟನೆಗಳು
ಗೋಳು ಹೊಯ್ದುಕೊಂಡಿದ್ದು
ಸಾಕು ನಾನೂ ಒಮ್ಮೆ ನಗುತ್ತೇನೆ..

ಬಲಿತು ಬೆಂಡಾದದ್ದು ಬವಣೆ ಬದುಕಿಗೆ
ಬೇಸತ್ತು ಬರಡಾಗುವುದು ಬರದ ಬದುಕಿಗೆ
ಬೆಂಕಿ ಭವಿಷ್ಯ ಸುಡುವಲ್ಲಿ ಬೆವರು ಬಳಿಯುವುದು
ಬಣ್ಣ ಬಣ್ಣದ ಬೂತ ಬೆಳಕ ಹರಿಸುವುದ ಬಿಟ್ಟು
ಬೆಂಕಿ ಹಚ್ಚಿದರೆ ಬೆಂಗಾವಲಿಗೆ ಬಾರರು ಬಂಧುಗಳು
ಬದುಕು ಬದಲಿಸರು....

--ರತೀಶ್ ಹೆಬ್ಬಾರ್  (ಬರ್ಯಾಣ-೫)

No comments:

Post a Comment

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ