ಕಣ್ಣಾಯಿಸಿದವರು

Tuesday, 13 November 2018

ಎಕ್ಸಾಮ್ ಟೆನ್ಸನ್

ತೋಚಿದ್ದ ಗೀಚಿದ್ದು

You missed ಎನ್ನುವ
ಮುಂಜಾವಿನ ಅಲಾರಾಮುಗಳು
ಎದ್ದೇಳಿಸಲೆಂದೇ ರಿಂಗಾಗುವ
ರೆಹಮಾನನ ಮ್ಯೂಸಿಕ್ಕು
ಅಮ್ಮನ ಅನಪೇಕ್ಷಿತ ಅನಿಯಮಿತ ಕರೆಗಳು
ಎಂದೂ ಬಾರಿಸದ ಗುಡಿಯ ಗಂಟೆಯ
ಡಂ ಡಂ ಸೌಂಡು

ಸಿನಿಮಾದಲ್ಲಷ್ಟೇ ನೋಡಿದ
ಹಕ್ಕಿ ಚಿಲಿಪಿಲಿ
ಆಗತಾನೆ ಬೆಳ್ಳಿ ಕವಚ ಒಡೆದು
ಹೊರಬಂದ ಕೋಳಿಮರಿ

ಬುಟ್ಟೋಗ್ಬೇಡಾ ಎಂದು ಗೋಗರೆವ
ಸ್ಲೀಪ್ ವೆಲ್ ಬೆಡ್ಡು
ರಾತ್ರಿ ನೋಡಿದ ಗಣೇಶ್ ಸಿನಿಮಾ ಗುಂಗು
ಅಪೂರ್ಣ ಬೆಳಗುಗನಸು

ಆರು ವರ್ಷದಲ್ಲಿ ಎಂದೂ ಬದಲಿಸದ
ಫೋನ್ ನಂಬರು
ಕಾಯುತ್ತಿದ್ದದ್ದು ಮಾತ್ರ ಎಂದೂ ಬಾರದ
ಆಕೆಯ ಕರೆಗಳಿಗೆ

ಇಷ್ಟೇ ಮತ್ತೆ ಆಗಷ್ಟೇ ಭೂಮಿಗೆ ಬಿದ್ದ
ಹಸುಗೂಸಿನಂತೆ ಎಲ್ಲೋ ಅಡಗಿದ್ದ
ಸಿಲಬಸ್ಸು  ಮತ್ತೆ ಮೇಜಿಗೆ ಬಂದು  ಅಳುವುದು
ತುಂಡು ಬ್ರೆಡ್ಡು ಜಾಮ್ ಸವರಿ
ಹೊಟ್ಟೆ ಒಳ ಸೇರುವುದರೊಳಗೆ
ನಾಲ್ಕು ಪ್ರಶ್ನೆಗೆ ಉತ್ತರ ಕಲಿಯತಕ್ಕದ್ದು...

--ರತೀಶ್ ಹೆಬ್ಬಾರ್ (ಬರ್ಯಾಣ-೪)


No comments:

Post a Comment

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ