ಕಣ್ಣಾಯಿಸಿದವರು

Sunday, 28 October 2018

ನೆನಪಿಸುವುದು ನಮ್ಮನೆಯೇ..

ತೋಚಿದ್ದ ಗೀಚಿದ್ದು

ಅವು ನೆನಪಿಸುವುದು
ಮತ್ತೆ ಮತ್ತೆ
ನಮ್ಮನೆಯೇ

ಕಾಂಕ್ರೀಟು ಕಟ್ಟಡದ
ಬಿಸಿಗೋಡೆಯೊಳಗೆ ಮಲಗಿ ನಿದ್ರೆ
ಬರುವುದೂ ತುಸು ಲೇಟೇ..
ಅದಕೊಂದು ಕೃತಕ ತಂಪುಸಿರು
ಕಾಲಬದಲಾಗಿದೆ ಕೂರಲು
ಕಂಬಳಿ ಕಾಣಲೊಲ್ಲದು
ಸೋಫೆಯ ಮೃದುತ್ವ ಮೈಯ ಮೆತ್ತನಾಗಿಸಲು
ಮುತ್ತಿಟ್ಟ ಮಣ್ಣು ಮತ್ತೆ ನೆನಪಾಗುವುದು

ಬಣ್ಣ ಬಳಿಯದ ಗೋಡೆ ಗೋಡೆಗೆ
ಛಾವಣಿ ಕಾಣುವ ಬಯಕೆ
ಅಲ್ಲಲ್ಲಿ ನಡು ನಡುವೆಯಷ್ಟೇ
ಬೀದಿ ಬದಿಗಳಲ್ಲಿ ಇಂತ ಒಂದಷ್ಟು
ಮನೆಗಳು.. ಈ ನಗರವೇ ಇಷ್ಟೋ
ಅಲ್ಲಲ್ಲ ಇಂತದೇ ತಾರಸಿಯ
ಮನೆ ನಮ್ಮೂರಲ್ಲಿ ಕಟ್ಟಿ ಬೀಗ ಬಯಸಿದ್ದಿದೆ.
ಅದೇ ಇಲ್ಲಿ ಬಿಸಿಲಿಗೆ ನೆರಳಷ್ಟು
ಮಳೆಗೆ ಕೊಡೆ ಹಿಡಿದಷ್ಟು
ಸೂರು ಸಿಕ್ಕರೆ ಸಾಕು
ಮತ್ತೆ ಮತ್ತೆ ನೆನಪಾಗುವುದು
ನಮ್ಮನೆಯೇ...

ಇಂತದೇ ಒಂದಷ್ಟು ಊರ ಗುಡಿಸಲು
ಸೋಗೆ ಜಾರುವುದು ಇಂದಿಗೆ ಕೊನೆ
ಮುಂದೆ ಸೋರುವ ಮಾಳಿಗೆಯೂ ಇತಿಹಾಸ
ಮತ್ತೆ ಮತ್ತೆ ನೆನಪಾಗುವುದು ನಮ್ಮನೆಯೇ..

--ರತೀಶ್ ಹೆಬ್ಬಾರ್ (ಬರ್ಯಾಣ-೩)

ಅವಧಿಯಲ್ಲಿ  ಪ್ರಕಟಿತಗೊಂಡಿರುತ್ತದೆ
https://avadhimag.com/?p=205028

Thursday, 11 October 2018

ಜಾಲತಾಣ ಜೈ

ತೋಚಿದ್ದ ಗೀಚಿದ್ದು


ಹೊಸದೇನನ್ನೋ ಮಾಡುವ
ತೆವಲು ಬಂದಾಗೆಲ್ಲ
ಮುಖಪುಟದೆಡೆಗೆ
ಕಣ್ಣು ಹಾಯಿಸಿಬಿಡುವೆ.

ನಿಜವೋ ಸುಳ್ಳೋ
ಪರೀಕಿಸುವ ವ್ಯವದಾನ
ನನಗೇ ಏಕೆ ಅವನಿಗೂ ಇಲ್ಲ

ಅದೇನೋ ಚಿತ್ರ ನೋಡಿ
ಇನ್ನೇನೋ ಗೀಚಿಬಿಡುವೆ
ಕೀಲಿಮಣೆಗೆ ಚಪಲ ಬಂದಾಗೆಲ್ಲ.
ಬೆರಳೆತ್ತಿದ ನೀಲಿ ಕೈಗಳ ನೋಡಿ
ಸುಕಿಸುವೆನು ನನಗೂ ಗೊತ್ತು
ಅವೆಂದಿಗೂ ಸತ್ಯವಲ್ಲವೆಂದು.

ಹಿಂಗೇನೇ ಹಸಿರಾದ ಒಳ
ಜಗತ್ತಿನಲಿ ನನ್ನವರಿರುವರು.
ಪುರುಸೊತ್ತಿನ ಕಿರು ಹೊತ್ತಿನಲಿ
'ನನ್ನ ಸ್ತಿತಿ' ನೋಡಿ  ಆನಂದವೋ
ಕ್ರೋದವೋ , ಏನೋ ಒಂದು
ಒಳಗೊಳಗೇ ಪುಳಕಗೊಂಡರೂ
ತುಟಿ ಅವಡುಗಚ್ಚಿ ಬೆನ್ನ ಮುಟ್ಟುವರು.

ಅವರಿಗಲ್ಲ ನಾ ಗೀಚುವುದು
ಕಾಲದ ಹರಣಕ್ಕೆ ಕೆಲ ಕಾಣಿಕೆ
ಎಂದು ನೀ ತಿಳಿದರೆ
ನನ್ನದೇನಿಲ್ಲ
ಹೊರ ಭಾವ ಒಳ 'ಬಾವಾ'
ಎಲ್ಲರೂ ನೋಡಿ ನಗುವವರೇ
ನನಗಲ್ಲ ತನ್ನೊಳಗೇ ನನ್ನೊಬ್ಬನ ನೋಡಿ..

ಚೂರು ಪಾರು ಪದಗಳೇ
ಅರಿವಿನ ವರ್ತುಲದೊಳಗೆ
ಪ್ರವೇಶಿಸದ ಬುದ್ದಿಯಿದುವೇ
ನಂಗೊಂದಿಷ್ಟು ಜಾಗ ಮೀಸಲಿಡುವಿರಿ
ಅಲ್ಲಲ್ಲ ನನ್ನದೇ  ಸಂಜಾತ ಪದಗಳಿಗೆ
ಮೀಸಲಿಡುವಿರಿ. ಅದಕಷ್ಟೇ ನಾನಾರೆಂದು
ತಿಳಿದದ್ದು ನನಗೂ ಅಲ್ಲ ನಿಮಗೂ ಅಲ್ಲ
ಬರುವೆ ಮತ್ತೆ ಇನಿತು ಸೌಖ್ಯದಲಿ..

--ರತೀಶ್ ಹೆಬ್ಬಾರ್ (ಬರ್ಯಾಣ-೨)

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ