ತೋಚಿದ್ದ ಗೀಚಿದ್ದು..
ಸ್ವಪ್ನಗಳಿಲ್ಲದ ನಿದಿರೆಗೆ ನಿಂದಿಸುವೆನು..
ನಿದಿರೆಯಿಲ್ಲದ ಇರುಳನ್ನೇ
ಮರೆತಿರುವಾಗ..
ಜಗವ ಜಯಿಸಲು ಪರಿತಪಿಸುವೆನು
ತನ್ನ ತಾನು ಜಯಿಸುವ ಕನಸ
ಕಾಣದಿರುವಾಗ..
ಪಾಳು ಬಾವಿಕಟ್ಟೆಯಲಿ
ಕೂತಾಗ ಬಿಂಬ ಕಾಣಿಸದಾಗ
ದುಃಖಿಸುವೆ
ನನ್ನ ನಾನು ಅರಿಯದಿದ್ದಾಗ..
ನಿನ್ನ ಪಡೆಯುವ ಬಯಕೆ
ನನ್ನ ನಾ ಸೇರದಿದ್ದಾಗ..
ಗಮ್ಯದೆಡೆಗಿನ ಓಟವಂತೆ
ನೆಲವ ಮುಟ್ಟಲು ಕ್ಷಣಗಳಿರುವಾಗ..
ಸಾಲು ಸಾಲು ಪದಗಳ
ಒರಣವಾಗಿಸುವೆ
ಒಣಜಂಭ ಮರೆಮಾಚಬೇಕೆನಿಸಿದಾಗ..
ಹಾದಿ ಸುಗಮಗೊಳಿಸುವ
ಹುನ್ನಾರ..
ಒಳ ಸ್ವಾರ್ಥದ ಗೋಡೆ
ಕಟ್ಟುತಿರುವಾಗ..
ನಾ ಕಾಣೊ ಕಣ್ಣು ಕುರುಡು ರಾಜರಾಜೇಂದ್ರ..
-- ರತೀಶ್ ಹೆಬ್ಬಾರ್ (ಬರ್ಯಾಣ-೧)
ಸ್ವಪ್ನಗಳಿಲ್ಲದ ನಿದಿರೆಗೆ ನಿಂದಿಸುವೆನು..
ನಿದಿರೆಯಿಲ್ಲದ ಇರುಳನ್ನೇ
ಮರೆತಿರುವಾಗ..
ಜಗವ ಜಯಿಸಲು ಪರಿತಪಿಸುವೆನು
ತನ್ನ ತಾನು ಜಯಿಸುವ ಕನಸ
ಕಾಣದಿರುವಾಗ..
ಪಾಳು ಬಾವಿಕಟ್ಟೆಯಲಿ
ಕೂತಾಗ ಬಿಂಬ ಕಾಣಿಸದಾಗ
ದುಃಖಿಸುವೆ
ನನ್ನ ನಾನು ಅರಿಯದಿದ್ದಾಗ..
ನಿನ್ನ ಪಡೆಯುವ ಬಯಕೆ
ನನ್ನ ನಾ ಸೇರದಿದ್ದಾಗ..
ಗಮ್ಯದೆಡೆಗಿನ ಓಟವಂತೆ
ನೆಲವ ಮುಟ್ಟಲು ಕ್ಷಣಗಳಿರುವಾಗ..
ಸಾಲು ಸಾಲು ಪದಗಳ
ಒರಣವಾಗಿಸುವೆ
ಒಣಜಂಭ ಮರೆಮಾಚಬೇಕೆನಿಸಿದಾಗ..
ಹಾದಿ ಸುಗಮಗೊಳಿಸುವ
ಹುನ್ನಾರ..
ಒಳ ಸ್ವಾರ್ಥದ ಗೋಡೆ
ಕಟ್ಟುತಿರುವಾಗ..
ನಾ ಕಾಣೊ ಕಣ್ಣು ಕುರುಡು ರಾಜರಾಜೇಂದ್ರ..
-- ರತೀಶ್ ಹೆಬ್ಬಾರ್ (ಬರ್ಯಾಣ-೧)